ಅಸಹಿಷ್ಣತೆಯ ಬಗ್ಗೆ ಹೀಗೊಂದು ಅಭಿಪ್ರಾಯ
26-11-2015ರಂದು ಶ್ರೀಮತಿ ಸೋನಿಯಾ ಗಾಂಧಿ ಇವರು ಲೋಕಸಭೆಯ ತಮ್ಮ ಭಾಷಣದಲ್ಲಿ ಸರಕಾರದ ಮೇಲೆ ಸಂವಿಧಾನವನ್ನು ಅಪಹರಿಸಿದ ಆಪಾದನೆ ಹೊರಿಸಿದ್ದಾರೆ.ಇದು ಸರಕಾರ ಸಂವಿಧಾನದಿವಸವನ್ನು ಆಚರಿಸುತ್ತಿದ್ದು ಲೋಕಸಭೆಯಲ್ಲಿ ಚರ್ಚೆಯ ಸಂದರ್ಭದಲ್ಲಿ. ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷರು ಸರದಾರ್ ಪಟೇಲರ ಪರಂಪರೆಯನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸಬಾರದೆಂದು ಮೋದಿಯವರಿಗೆ ಸಲಹೆ ನೀಡಿದ್ದರು. ಮಹಾತ್ಮ ಗಾಂಧಿಯವರ ಹೆಸರನ್ನು ಬಿಜೆಪಿಯವರು ಉಲ್ಲೇಖಿಸಿದಾಗಲೆಲ್ಲ ಕಾಂಗ್ರೆಸ್ಸಿನವರು ಗಾಂಧಿ ಕೊಲೆಗೆ ಕಾರಣರಾದವರು ಅವರ ಹೆಸರನ್ನು ಹೇಳುವುದಕ್ಕೂ ಅರ್ಹರಲ್ಲವೆಂದು ಹೇಳುವುದು ಮಾಮೂಲಿಯೇ ಆಗಿಬಿಟ್ಟಿದೆ. ಗಾಂಧಿಕೊಲೆಗೆ ರಾಸ್ವಸೇ ಆಗಲೀ ಅಂದಿನ ಜನಸಂಘವಾಗಲೀ ಕಾರಣವಲ್ಲವೆಂದು ನ್ಯಾಯಾಲಯಗಳೇ ತೀರ್ಪಿಸಿದ ಮೇಲೂ. ಇವೆಲ್ಲ ಒಂದು ಅಂಶವನ್ನು ಎತ್ತಿ ತೋರಿಸುತ್ತವೆ: ಭಾರತದಲ್ಲಿ ಒಳ್ಳೆಯದೇನುಂಟೋ ಅದಕ್ಕೆಲ್ಲ ತಾವೇ ಒಡೆಯರೆಂದು ಕೆಲವರು ಮಾಡಿಕೊಂಡು ಬಿಟ್ಟಿದ್ದಾರೆ. ಬೇರೆಯವರು ಒಳ್ಳೆಯವರಿದ್ದಾರೆ, ಒಳ್ಳೆಯ ಕೆಲಸ ಮಾಡತ್ತಿದ್ದಾರೆ ಎಂದಾದರೆ ಅದು ಅವರು ಮಾಡುತ್ತಿರುವುದಲ್ಲ ಅದನ್ನು ಮಾಡುತ್ತಿರುವವರು ತಮ್ಮ ಕಡೆಯವರೇ, ಅದಕ್ಕೆ ವಿರುದ್ಧವದುದನ್ನೇನ್ನೊ ಮೊದಲಿನವರು ಮಾಡುತ್ತಿದ್ದಾರೆ ಎಂದು ತೋರಿಸಲು ಕಷ್ಟಪಡುವುದು ಇವರಿಗೆ ಹೀಗೆ ಸಹಜ. ಅದರ ಪರಿಣಾಮವೇ ಅಸಹಿಷ್ಣುತೆಯ ದೊಡ್ಡ ಪ್ರಚಾರ ಎನಿಸುತ್ತದೆ.
ನಾವು ಅಸಹನೆ ತೋರಲೇ ಬೇಕಾದ ಹಲವು ಐಟಮ್ಮುಗಳಿವೆ. ಬೃಹದಾಕಾರದಲ್ಲಿ ಬೆಳೆದು ನಿಂತಿರುವ ಭ್ರಷ್ಟಾಚಾರ, ಸೌಲಭ್ಯಗಳು ಸಾಮಾನ್ಯನಿಗೆ ಎಟುಕದಿರುವ ವಾತಾವರಣ, ಇಷ್ಟೆಲ್ಲ ಪ್ರಚಾರದನಂತರವೂ ಹರಡದ ಸ್ವಚ್ಛತೆ, ಇತ್ಯಾದಿ. ಇವುಗಳ ವಿರುದ್ಧ ಅಸಹನಾ ಆಂದೋಲನ ಮಾಡುವುದಲ್ಲ. ರಚನಾತ್ಮಕವಾಗಿ ಇವುಗಳ ಸಾಧನೆಗೆ ತಮ್ಮ ಕೈಲಾದುದನ್ನು ಮಾಡುವುದು. ಈ ಕಡೆಗೆ ಎಲ್ಲರ ಗಮನ ಹರಿಯಲೆಂದು ಹಾರೈಸುವೆ.
No comments:
Post a Comment