ಅಂತರ ರಾಷ್ಟ್ರೀಯ ಯೋಗದಿವಸ
ಯೋಗವಿಜ್ಷಾವೀಗ ಪ್ರಪಂಚದ ತುಂಬೆಲ್ಲ ಹರಡಿದ್ದು ವಿಭಿನ್ನ ರೀತಿಯ ಮಾರ್ಪಾಟುಗಳಿಗೂ ಒಳಗಾಗಿದೆ. ಜನಪ್ರಿಯವಾಗಿದೆ. ಹೀಗಾಗಿ ಅಲ್ಲಲ್ಲಿ ಯೋಗ ದಿವಸವನ್ನು ತಮ್ಮತಮ್ಮ ಅನುಕೂಲಕ್ಕೆ ತಕ್ಕಂತೆ ಆಚರಿಸುತ್ತಿದ್ದರು.
ಇದನ್ನೆಲ್ಲ ಗಮನಿಸಿದ ನಮ್ಮ ಪ್ರಧಾನ ಮಂತ್ರಿಗಳು 2014ರಂದು ವಿಶ್ವಸಂಸ್ಥೆಯ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದಾಗ ಜೂನ್ 21ನ್ನು ಅಂತರರಾಷ್ಟ್ರೀಯ ಯೋಗ ದಿವಸವೆಂದು ಆಚರಿಸಬೇಕೆಂಬ ಪ್ರಸ್ತಾಪವನ್ನು ಮುಂದಿಟ್ಟರು. ವಿಶ್ವಸಮುದಾಯವು ಇದನ್ನು ಕೂಡಲೇ ಒಪ್ಪಿತು.
ಒಪ್ಪದೇ ಏನು? ಇದೊಂದು ಪ್ರದೇಶದವರಿಗೋ, ಭಾಷೆಯ ಜನರಿಗೋ, ಧಾರ್ಮಿಕ ಸಂಪ್ರದಾಯದ ಜನರಿಗೋ ಅನ್ವಯವಾಗುವಂತಹ ಒಂದು ಆಚಾರವಲ್ಲ ತಾನೆ. ಈ ಎಲ್ಲ ವರ್ಗದವರನ್ನೂ ಮೇಲಕ್ಕೆತ್ತಬಲ್ಲ ನಿಜವಾದ ಅರ್ಥದ ಧಾರ್ಮಿಕ ಶಿಸ್ತಲ್ಲವೇ? ವಿಶ್ವಕ್ಕ ಭಾರತದ ಕೊಡುಗೆಯೊಂದಕ್ಕೆ ಕಡೆಗೂ ಮಾನ್ಯತೆ ದೊರಕಿತು.
ಮಹರ್ಷಿ ಪತಂಜಲಿ ಯೋಗ ವಿಜ್ಞಾನದ ಪಿತ ಎಂಬಂತೆ ಹೆಸರು ಗಳಿಸಿದ್ದಾನೆ. ಅವನು 195 ಸೂತ್ರಗಳಲ್ಲಿ ಯೋಗ ತತ್ವಗಳನ್ನು ಸೆರೆಹಿಡಿದಿದ್ದಾನೆ. ಇವೇ ಯೋಗಶಾಸ್ತ್ರದ ನೆಲಗಟ್ಟು. ದೇಹವನ್ನು ಆರೋಗ್ಯಕರವಾಗಿಟ್ಟುಕೊಳ್ಳುವುದು, ಮಾನಸಿಕ ನಿಯಂತ್ರಣ ಸಾಧಿಸುವುದು ಮತ್ತು ತನ್ಮೂಲಕ ಆಧ್ಯಾತ್ಮಿಕ ಪ್ರಗತಿ ಸಾಧಿಸುವುದು - ಇವು ಯೋಗಾಭ್ಯಾಸದ ಗುರಿಗಳು. ಹೀಗೆ ಇದು ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸಗಳ ಒಂದು ಪರಂಪರೆಯಾಗಿದ್ದು ಇದರ ಮೂಲಸ್ಥಾನ ಭಾರತವೆಂಬುದು ಹೆಮ್ಮೆಯ ವಿಷಯ.
ಇದನ್ನೆಲ್ಲ ಗಮನಿಸಿದ ನಮ್ಮ ಪ್ರಧಾನ ಮಂತ್ರಿಗಳು 2014ರಂದು ವಿಶ್ವಸಂಸ್ಥೆಯ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದಾಗ ಜೂನ್ 21ನ್ನು ಅಂತರರಾಷ್ಟ್ರೀಯ ಯೋಗ ದಿವಸವೆಂದು ಆಚರಿಸಬೇಕೆಂಬ ಪ್ರಸ್ತಾಪವನ್ನು ಮುಂದಿಟ್ಟರು. ವಿಶ್ವಸಮುದಾಯವು ಇದನ್ನು ಕೂಡಲೇ ಒಪ್ಪಿತು.
ಒಪ್ಪದೇ ಏನು? ಇದೊಂದು ಪ್ರದೇಶದವರಿಗೋ, ಭಾಷೆಯ ಜನರಿಗೋ, ಧಾರ್ಮಿಕ ಸಂಪ್ರದಾಯದ ಜನರಿಗೋ ಅನ್ವಯವಾಗುವಂತಹ ಒಂದು ಆಚಾರವಲ್ಲ ತಾನೆ. ಈ ಎಲ್ಲ ವರ್ಗದವರನ್ನೂ ಮೇಲಕ್ಕೆತ್ತಬಲ್ಲ ನಿಜವಾದ ಅರ್ಥದ ಧಾರ್ಮಿಕ ಶಿಸ್ತಲ್ಲವೇ? ವಿಶ್ವಕ್ಕ ಭಾರತದ ಕೊಡುಗೆಯೊಂದಕ್ಕೆ ಕಡೆಗೂ ಮಾನ್ಯತೆ ದೊರಕಿತು.
No comments:
Post a Comment