ಪ್ರಭಾವಗಳು
ನಾವು ಯಾರುಯಾರಿಂದ ಹೇಗೆ ಪ್ರಭಾವಿತಾಗುತ್ತೇವೆ ಎಂಭುದೊಂದು ವಿಚಿತ್ರ. ಈದಿನ ನೋಡಿ. ನಾವು ಅಂದರೆ ನಾನು ಮತ್ತು ಇವಳು ಒಂದು ಊಟದ ಮನೆಗೆ ಹೋಗಿದ್ದೆವು. ಸಂದರ್ಭವೇನೂ ಸಂಭ್ರಮ ಪಡುವಂತಹುದಲ್ಲ ಬಿಡಿ. ಇವಳ ದೊಡ್ಡಪ್ಪನ ಸೊಸೆಯ ಮೃತ ವರ್ಷಾಂತಿಕ. ಅಂತೂ ಸಂಬಂಧಿಗಳನೇಕರ ಭೇಟಿಯಾಯಿತು.ಕುಶಲೋಪರಿಗಳು ವಿನಿಮಯವಾಯಿತು. ಸಂಭ್ರಮವಲ್ಲದಿದ್ದರೂ ಸಂತೋಷದ ಅಲೆ ಮನಸಿನಲ್ಲಿ ಬಂದುದು ಸುಳ್ಳಲ್ಲ. ಸಂಜೆ ಏಳು ಗಂಟೆಯಾಗಿರಬಹುದು.
ನಾವು ವಾಸವಾಗಿರುವುದು ಒಂದು ಫ್ಲಾಟಿನಲ್ಲಿ. ಅದೂ ನೆಲಸಮಕಟ್ಟಿನಲ್ಲಿ. ಇದು ನಲವತ್ತು ಫ್ಲಾಟುಗಳಿರುವ ಅಪಾರ್ಟ್ಮೆಂಟಾಗಿದ್ದು ನಮ್ಮ ಮನೆಯ ಮೇಲುಗಡೆ ಮೊದಲನೆಯ ಮಹಡಿಯಲ್ಲಿಯೂ ಒಂದು ಮನೆ ಇದೆ. ಅವರದು ಎರಡು ಮಕ್ಕಳು ಅವರ ತಂದೆ ತಾಯಿ, ಮಕ್ಕಳ ಅಜ್ಜಿ ಇರುವ ಕುಟುಂಬ. ಮನೆಯಲ್ಲಿದ್ದಷ್ಟೂ ಹೊತ್ತು ಮಕ್ಕಳು ಕುಣಿದಾಡುವುದು ಫುಟ್ ಬಾಲ್ ಆಡುವುದು ವಸ್ತುಗಳನ್ನು ಬೀಳಿಸುವುದು, ವಸ್ತುಗಳನ್ನು ಎಳೆದಾಡುವುದು ನಡೆಸಿಯೇ ಇರುತ್ತಾರೆ. ಇಂದು ನನಗೂ ನನ್ನವಳಿಗೂ ವಾದ ಉಂಟಾದುದು ಈ ಕಾರಣಕ್ಕಾಗಿ. ನಮಗೆ ಪರಿಹರಿಸಿಕೊಳ್ಳಲು ಸಾಧ್ಯವಾದುದನ್ನು ಸಹಿಸಬೇಕು ಅಷ್ಟೆ ಎಂಬುದು ನನ್ನ ವಾದ; ಹಾಗಲ್ಲ ನಾವು ಅವರ ಮನೆಗೆ ಹೋಗಿ ನಮಗೆ ತೊಂದರೆಯಾಗುತ್ತಿದೆ ಹಾಗಾಗದಂತೆ ನಡೆದುಕೊಳ್ಳುವುದು ಮಕ್ಕಳಿಗೆ ಬುದ್ಧಿ ಹೇಳಿ ಸರಿದಾರಿಗೆ ತರುವುದೂ ಅವರ ಜವಾಬ್ದಾರಿ ಎಂದು ಅವರಿಗೆ ಹೇಳ ಬೇಕೆಂಬುದೂ ಇವಳ ನಿಲುವು. ಪದೇ ಪದೇ ಈ ವಾದವನ್ನು ನನ್ನ ತಲೆಯೊಳಗೆ ತುರುಕಲು ಅವಳು ಇನ್ನಿಲ್ಲದ ಪ್ರಯತ್ನ ಮಾಡತೊಡಗಿದಾಗ ಈ ಕೂಡಲೇ ಹೋಗಿ ಅವರೊಡನೆ ಜಗಳ ಮಾಡಿಬರೋಣವೆನ್ನುವಷ್ಟು ಉತ್ತೇಜಿತನಾದೆ.
ಪ್ರಭಾವ ಹೇಗೆ ಉಂಟಾಗುತ್ತದೆ ನೋಡಿ. ವರ ಮನೆಗೆ ಇಬ್ಬರೂ ಹೋದೆವು ಆದರೆ ಜಗಳಾಡಲಿಲ್ಲ. ಮಕ್ಕಳಿಗೆ ಒಂದೊಂದು ಗಿಫ್ಟ್ ಕೊಟ್ಟು ಸ್ವಲ್ಪ ಬುದ್ಧಿ ಹೇಳಿ ಮನೆಯವರಿಗೂ ಸಲಹೆ ಕೊಟ್ಟು ಬಂದೆವು. ಕಡೆಗೆ ನೋಡಿದರೆ ಪುನರಾಯನಮಃ ಕಪಿಃ.
ತಡೆದುಕೊಳ್ಳುವುದೊಂದೇ ದಾರಿ.
No comments:
Post a Comment