ಹೈದರಾಬಾದು ವಿಶ್ವವಿದ್ಯಾಲಯದ ದರ್ಘಟನೆ
ಎರಡು ದಿನಗಳ ಹಿಂದೆ ಹೈದರಾಬಾದು ವಿಶ್ವವಿದ್ಯಾಲಯದ ಆವರಣದಲ್ಲಿ ದುರ್ಘಟನೆಯೊಂದು ನಡೆದು ಹೋಯಿತು. ಒಬ್ಬ ಪಿ ಎಚ್ಡಿ ವಿದ್ಯಾರ್ಥಿಯ ಆತ್ಮಹತ್ಯೆ ಎಂದರೆ ತುಂಬ ದುರದೃಷ್ಟಕರವೇ ಸರಿ. ಅವನ ಆತ್ಮಕ್ಕೆ ದೇವರು ಶಾಂತಿಯನ್ನು ನೀಡಲಿ. ಇಂತಹ ಸೂಕ್ಷ್ಮ ಘಟನೆಯ್ನು ರಾಜಕೀಯಕ್ಕೆ ಬಳಸಿಕಳ್ಳುತ್ತಿರುವುದು ಅವಮಾನಕರ. ಅದೂ ಜನಮಾನಸವನ್ನು ಉದ್ವೇಗಗೊಳ್ಳುವಂತೆ ಪ್ರಚೋದಿಸುವ ಮೂಲಕ. ಹೀಗಾಗದಿರಲಿ. ರಾಕೀಯಸ್ಥರು ರಾಷ್ಟ್ರದ ರಾಜ್ಯದ ಅಭಿವೃದ್ಧಿಕನಸುಗಳ ಬಗ್ಗೆ ಕ್ರಿಯಾಶೀಲರಾಗಲಿ. ವಿಶ್ವವಿದ್ಯಾಲಯದ ಸಮಾಲೋಚನ ವಿಭಾಗ ಸಮಸ್ಯೆಗಲನ್ನು ಗುರುತಿಸಿ ಸೂಕ್ತ ಸಲಹೆಗಳನ್ನು ಕೊಡುತ್ತಾ ಇಂತಹ ಘಟನೆಗಳು ನಡೆಯದಂತೆ ತಡೆಯಬೇಕು. ಸಮಾಲೋಚನ ವಿಭಾಗಿಲ್ಲದಿದ್ದರೆ ಅಂತಹ ವಿಭಾಗವೊಂದನ್ನು ತೆರೆಯುವುದು ತತ್ಕ್ಷಣದ ಅಗತ್ಯ.
No comments:
Post a Comment